ಬ್ರೇಕಿಂಗ್ ನ್ಯೂಸ್ ನಟಿ ವೈಷ್ಣವಿ ಗೌಡ ಮದುವೆ ನಿಶ್ಚಿತಾರ್ಥ : ಹುಡುಗ ಯಾರು ಗೊತ್ತಾ ?

ಕೆಲ ತಿಂಗಳ ಹಿಂದಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿದ ವೈಷ್ಣವಿ ಕುಟುಂಬ ವೈಷ್ಣವಿಗೆ ಮದುವೆ ಮಾಡಲು ನಿರ್ಧರಿಸಿ ಹುಡುಗನನ್ನು ಹುಡುಕುತ್ತಿದ್ದರು.. ಇನ್ನು ವೈಷ್ಣವಿ ಬಿಗ್ ಬಾಸ್ ನಿಂದ ಬಂದ ಬಳಿಕ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವರು ಎನ್ನುವ ಮಾತು ಕೇಳಿ ಬಂದರೂ ಇನ್ನು ತೆರೆ ಮೇಲೆ ಬರಲಿಲ್ಲ.. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ವೈಷ್ಣವಿ ಆಗಾಗ ಫೋಟೋಗಳು ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ಆಗು ಹೋಗುಗಳನ್ನು ತಿಳಿಸುತ್ತಿದ್ದರು..

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಅವರ ನಿಶ್ಚಿತಾರ್ಥದ ಫೋಟೋವೊಂದು ವೈರಲ್ ಆಗಿದ್ದು ವೈಷ್ಣವಿ ಅವರು ಮದುವೆಯಾಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ. ಹೌದು ವೈಷ್ಣವಿ ಅವರು ಕುಟುಂಬದ ಜೊತೆ ಹುಡುಗನ ಜೊತೆ ಹಾರ ಹಾಕಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಿಶ್ಚಿತಾರ್ಥದ ಫೋಟೋ ಎನ್ನಲಾಗುತ್ತಿದೆ.. ಇನ್ನು ಫೋಟೋದಲ್ಲಿರುವ ಹುಡುಗ ನಟ ವಿರಾಜ್ ಎಂದು ಕೆಲವರು ಹೇಳುತ್ತಿದ್ದು ವೈಷ್ಣವಿ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.. ಇನ್ನು ಕುಟುಂಬದ ಈ ಫೋಟೋದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಕೂಡ ನಿಂತಿದ್ದು ವೈಷ್ಣವಿ ಮದುವೆಯಾಗುತ್ತಿರುವ ಹುಡುಗ ಯಾರು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.. ಒಟ್ಟಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ವೈಷ್ಣವಿಗೆ ಶುಭವಾಗಲಿ.. ಹೊಸ ಜೀವನ ಅವರ ಕನಸುಗಳನ್ನು ನನಸು ಮಾಡಲಿ..

ಇನ್ನು ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಅಧಿಕೃತ ಮಾಹಿತಿ ಹೊರ ಬಂದಿದ್ದು ವೈಷ್ಣವಿ ಅವರು ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಮಾಡುತ್ತಿದ್ದಾರೆ.. ಹೌದು ವೈಷ್ಣವಿ ಅವರು ಹೊಸ ಧಾರಾವಾಹಿಯೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಮಂಗಳ ಗೌರಿ‌ ಮದುವೆ ಧಾರಾವಾಹಿಯಲ್ಲಿ ನಟನಾಗಿದ್ದ ಗಗನ್ ಚಿನ್ನಪ್ಪ ಅವರು ಈ ಧಾರಾವಾಹಿಯಲ್ಲಿ ನಾಯಕನಾಗಿದ್ದು ಸಧ್ಯದಲ್ಲಿಯೇ ತೆರೆ ಮೇಲೆ ಕಂಬ್ಯಾಕ್ ಮಾಡಲಿದ್ದಾರೆ ( video credit : kannada tv )