ಕಾಂತಾರ ಸಿನಿಮಾದ ಹಾಡಿಗೆ ಸುಂದರವಾದ ಹೆಜ್ಜೆ ಹಾಕಿ ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದ ರಾಗಿಣಿ ಪ್ರಜ್ವಲ್ ದೇವರಾಜ್

 ತೆರೆಯ ಮೇಲೆ ರಂಜಿಸುವ ಕಲಾವಿದರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳು ತಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದಾರೆ.

ಹೊಸ ಹೊಸ ಅಪ್ಡೇಟ್ ಗಳ ಮೂಲಕ ಅಭಿಮಾನಿಗಳ ಜೊತೆಗೆ ತಮ್ಮ ಖುಷಿಯನ್ನು ಸಹಾ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಅಂತಹ ಸಿನಿಮಾ ನಟಿಯರಲ್ಲಿ ಒಬ್ಬರು ರಾಗಿಣಿ ಪ್ರಜ್ವಲ್ ಅವರು.

ಹೌದು ನಟಿ ರಾಗಿಣಿ ಪ್ರಜ್ವಲ್ ಅವರು ಸ್ಯಾಂಡಲ್ವುಡ್ ನ ನಟ ಪ್ರಜ್ವಲ್ ದೇವರಾಜ್ ಅವರ ಜೊತೆ ಮದುವೆಯಾದ ನಂತರದಲ್ಲಿ ಸಿನಿಮಾಗಳಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಇತ್ತೀಚಿಗೆ ಅವರ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದು, ಮುಂದಿನ ದಿನಗಳಲ್ಲಿ ಹೊಸ ಸಿನಿಮಾಗಳನ್ನು ಮಾಡಬಹುದು ಎನ್ನುವ ನಿರೀಕ್ಷೆಗಳಿವೆ.

ರಾಗಿಣಿ ಅವರು ಸಿನಿಮಾದಿಂದ ದೂರವಿದ್ದ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಯೇ ಇದ್ದರು. ಅವರು ಹಾಗೂ ಪ್ರಜ್ವಲ್ ದೇವರಾಜ್ ಜೊತೆಯಾಗಿ ಡ್ಯಾನ್ಸ್ ಮಾಡುವ ವೀಡಿಯೋಗಳು, ರಾಗಿಣಿ ಅವರು ಒಬ್ಬರೇ ಹಾಡಿಗೆ ಹೆಜ್ಜೆಗಳನ್ನು ಹಾಕಿದ ವೀಡಿಯೋಗಳು, ಫಿಟ್ನೆಸ್ ಬಗ್ಗೆ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ರಾಗಿಣಿ ಅವರ ಡ್ಯಾನ್ಸ್ ವೀಡಿಯೋಗಳು ಭರ್ಜರಿ ವೈರಲ್ ಆಗುವುದು ಮಾತ್ರವೇ ಅಲ್ಲದೇ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆಗಳು ಸಹಾ ಹರಿದು ಬಂದು, ಕಾಮೆಂಟ್ ಗಳಲ್ಲಿ ಅವರನ್ನು ಅಭಿಮಾನಿಗಳು ಹಾಡಿ ಹೊಗಳುತ್ತಾರೆ. ಇದೀಗ ರಾಗಿಣಿ ಅವರು ಸೂಪರ್ ಹಿಟ್ ಸಿನಿಮಾ ಕಾಂತಾರದ ಅದ್ಭುತ ಹಾಗೂ ಅಪಾರ ಜನ ಮೆಚ್ಚುಗೆಯನ್ನು ಪಡೆದಿರುವ ಸಿಂಗಾರ ಸಿರಿಯೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ