ಬಕಿನಿ ಧರಿಸಿ ಮಾಡಿರುವ ಡ್ಯಾನ್ಸ್ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರೀಂ ಚಿತ್ರದ ಫೈಟಿಂಗ್ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದರು.ನಟಿ ಸಂಯುಕ್ತಾ ಹೆಗ್ಡೆ ತಾನು ಗಾಯದಿಂದ ಚೇತರಿಸಿಕೊಂಡಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಲು ಹೊಸ ವೀಡಿಯೋ ಶೇರ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಾರೆಯರು ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ.
ಸಿನಿಮಾ ನಟಿಯರು ಅದೇನು ಮಾಡಿದರೂ ಸುದ್ದಿಯೇ. ಆದರೆ ಕೊಂಚ ಅತಿರೇಕವಾಗಿ ಆಡಿದರೆ ಮಾತ್ರ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಅವರ ಸುದ್ದಿಗಳು ವೈರಲ್ ಆಗುತ್ತವೆ. ಇದೇ ರೀತಿ ಟ್ರೋಲ್ ಆಗುವ ಅದೇ ರೀತಿ ವೈರಲ್ ಆಗುವಂತಹ ನಟಿ ಅಂದರೆ ಅದು ಕನ್ನಡದ ಸಂಯುಕ್ತಾ ಹೆಗ್ಡೆ. ಹೌದು, ನಟಿ ಸಂಯುಕ್ತಾ ಹೆಗ್ಡೆ ಸ್ಯಾಂಡಲ್ವುಡ್ನಲ್ಲಿ ಸದಾ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ನಟಿ.
ಮೂರು ತಿಂಗಳಲ್ಲಿ ಮೊದಲ ಡ್ಯಾನ್ಸ್ ವಿಡಿಯೊ. ನನ್ನ ಚಿಕಿತ್ಸೆ ಪೂರ್ಣಗೊಂಡಿದೆ. ನನ್ನ ತಜ್ಞರು ಚೆನ್ನಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದಾಗಿ ಸಾಕಷ್ಟು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ ಅಲ್ಲಿ ಕೆಲವೇ ದಿನದಲ್ಲಿ ಹೊರಗೆ ಕಳುಹಿಸಿದ್ದರು. ಕಾರಣ ಪ್ರತಿಸ್ಪರ್ಧಿ ಸಮೀರ್ ಆಚಾರ್ಯ ಅವರ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ಬಿಗ್ ಬಾಸ್ ನಿಂದ ಹೊರ ಬಂದಿದ್ದರು. ಇನ್ನು ನಟಿ ಸಂಯುಕ್ತ ಹೆಗ್ಡೆ ಮೊದಲಿನಿಂದಲೂ, ಸಖತ್ ಬೋಲ್ಡ್. ಸದಾ ಬೋಲ್ಡ್ ಅವತಾರಗಳಲ್ಲಿ ಸಂಯುಕ್ತಾ ಹೆಗ್ಡೆ ಕಾಣಿಸಿಕೊಳ್ಳುತ್ತಾರೆ.