ರೂಪೇಶ್ ಶೆಟ್ಟಿ ಅವರ ಮನೆ ಕಡೆಯಿಂದ ಬಂದ ಮದುವೆ ಪ್ರಪೋಸಲ್ ಗೆ ಸಾನ್ಯ ಉತ್ತರ ಏನೆಂದು ನೋಡಿ : ವಿಡಿಯೋ ವೈರಲ್

 ಸಾನ್ಯ  ಅಯ್ಯರ್ ಕನ್ನಡ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅವರು 'ಪುಟ್ಟ ಗೌರಿ ಮದುವೆ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ಪುಟ್ಟ ಗೌರಿ ಪಾತ್ರವನ್ನು ನಿರ್ವಹಿಸಿದರು. ಸೆಪ್ಟೆಂಬರ್ 21 1998 ರಂದು ಜನಿಸಿದ ಸನ್ಯಾ, ಭಾರತದ ಕರ್ನಾಟಕದ ಬೆಂಗಳೂರಿನಿಂದ ಬಂದವರು. 2022 ರಲ್ಲಿ, ಸನ್ಯಾ ಅಯ್ಯರ್ ಅವರ ವಯಸ್ಸು 24 ವರ್ಷಗಳು.

ಒಟಿಟಿಯಿಂದ ಟಿವಿ ಬಿಗ್ ಬಾಸ್‌ವೆರೆಗೂ  ಸ್ಪರ್ಧಿಗಳಾಗಿ ಜೊತೆಯಾಗಿ ಕಾಣಿಸಿಕೊಂಡ ಜೋಡಿ ಸಾನ್ಯ ಮತ್ತು ರೂಪೇಶ್ ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡು ಬಂದಿರುವ ಈ ಜೋಡಿ ಮಧ್ಯೆ ಮದುವೆ ಆಲೋಚನೆ ಇದ್ಯಾ ಎಂಬುದರ ಬಗ್ಗೆ ನಟಿ ಸಾನ್ಯ ನೇರ ಉತ್ತರ ಕೊಟ್ಟಿದ್ದಾರೆ.

ಇದೀಗ ಇದರ ಬಗ್ಗೆ ಯೋಚನೆನೆ ಮಾಡಬಾರದು. ನನ್ನ ಕನಸಿನ ಜರ್ನಿ ಇದೀಗ ಶುರುವಾಗುತ್ತಿದೆ. ಇನ್ನೊಂದು 5 ವರ್ಷ ನಾನು ನನ್ನ ಕೆರಿಯರ್‌ನತ್ತ ಗಮನ ಕೊಡಬೇಕು. ಹಾಗಂತ ನಾನು ರೂಪೇಶ್ ಫ್ರೆಂಡ್‌ಶಿಪ್ ಬಿಡ್ತೀನಿ ಅಂತಾ ಅಲ್ಲ. ಹೋಗ್ತಾ ಹೋಗ್ತಾ ಹೇಗೆ ಡೆವಲಪ್ ಆಗುತ್ತೆ ನನಗೆ ಗೋತ್ತಿಲ್ಲ. ಮದುವೆ ಎಲ್ಲಾ ಇವಾಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ನಾಯಕಿಯಾಗೋದು ನನ್ನ ಕನಸು. ಅದನ್ನ ನಾನು ಪಕ್ಕಕ್ಕೆ ಇಡೋಕೆ ಆಗಲ್ಲ ಎಂದು ಬಿಗ್ ಬಾಸ್ ಸ್ಪರ್ಧಿ ಸಾನ್ಯ, ರೂಪೇಶ್ ಜೊತೆಗಿನ ಮದುವೆಯ ಬಗ್ಗೆ ಮಾತನಾಡಿದ್ದಾರೆ. 

ಆದರೂ ಸಹ ಅವರು ರೂಪೇಶ್ ಶೆಟ್ಟಿ ಬಗ್ಗೆ ಇರುವ ಪ್ರೀತಿ ಬಗ್ಗೆ ಬಹಳವಾಗಿ ಮಾತನಾಡಿದ್ದಾರೆ . ಮುಂದೆ ಇದರ ಬಗ್ಗೆ ಕಾಲವೇ ನಿರ್ದರಿಸುತ್ತೆ ಎಂದು ಹೇಳಿದ್ದಾರೆ ಈ ಕೆಳಗೆ ಇರುವ ವಿಡಿಯೋದಲ್ಲಿ ಏನು ಹೇಳಿದ್ದಾರೆ ನೋಡಿ (video credit : public music )