ಅಭಿಮಾನಿಗಳ ಪಾಲಿನ ಪ್ರೀತಿಯ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಟುಂಬದ ಪಾಲಿನ ಪ್ರೀತಿಯ ಅಪ್ಪು ಅಗಲಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ.ಕಳೆದ ತಿಂಗಳಿನಲ್ಲಿ ಆಗಸ್ಟ್ 15 ರಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಂದೆ ತಾಯಿಗಳ ಪ್ರತಿಮೆಯೊಂದಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಿ ಅಪ್ಪು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಬಿಂಬಿಸುವ ಕೆಲವು ಚಿತ್ರಣಗಳು ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ ಶೋಭೆಯನ್ನು ಹೆಚ್ಚಿಸಿತ್ತು.
ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ನಮಗೆ ಗೊತ್ತಿದೆ ಎಷ್ಟೇ ಬ್ಯುಸಿ ಇದ್ದರು, ಏನೇ ಕೆಲಸ ಇದ್ದರು ಅಪ್ಪು ಅವರು ಫ್ಯಾಮಿಲಿಗಾಗಿ ಸಮಯ ಕೊಡುವುದನ್ನು ಕಡಿಮೆ ಮಾಡುತ್ತಿರಲಿಲ್ಲ.ಎಲ್ಲರಿಗು ಅಪ್ಪು ಅವರು ಹೇಳುತ್ತಿದ್ದಿದ್ದು ಒಂದೇ ಮಾತು. “ಮೊದಲು ನಿಮ್ಮ ಫ್ಯಾಮಿಲಿನ ಪ್ರೀತಿಸಿ, ನಂತರ ನನ್ನನ್ನ ಪ್ರೀತಿಸಿ” ಅಂತ. ಅಪ್ಪು ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಚಂದನವದಲ್ಲಿ ಎಲ್ಲರ ನೆಚ್ಚಿನ ಜೋಡಿ ಎಂದರೆ ನಟ ದಿವಂಗತ ಪುನೀತ್ ರಾಜಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ಎನ್ನುವ ಮಟ್ಟಕ್ಕೆ ಅವರು ಪರಿಚಿತರಾಗಿದ್ದರು. ಪ್ರೀತಿ ಮದುವೆಯಾದ ಈ ಜೋಡಿಯನ್ನು ಆದರ್ಶ ದಂಪತಿಗಳು ಎಂದು ಕರೆಯಲಾಗುತ್ತಿತ್ತು.
ಇವರದ್ದು ಲವ್ ಮ್ಯಾರೇಜ್, ಇಬ್ಬರು ಮಕ್ಕಳಿದ್ದಾರೆ ಎನ್ನುವ ವಿಚಾರ ನಮಗೆ ಗೊತ್ತಿದೆ. ಅಪ್ಪು ಅವರು ಇಲ್ಲವಾಗಿ ಒಂದು ತಿಂಗಳು ಕಳೆದ ನಂತರ ಅಪ್ಪು ಮತ್ತು ಅಶ್ವಿನಿ ಅವರ ಮದುವೆ ವಾರ್ಷಿಕೋತ್ಸವ ದಿನ ಬಂದಿತು. ಸದ್ಯ ನಮ್ಮ ಇಬ್ಬರು ಮಕ್ಕಳ ಹಾಗು ಅಪ್ಪು ನಡೆಸುತ್ತಿದ್ದ ಪಿ ಆರ್ ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಅವರೇ ತೆಗೆದುಕೊಂಡಿದ್ದಾರೆ. ಅಪ್ಪು ಅವರು ಮಾಡುತಿದ್ದ ಸಾಕಷ್ಟು ಪ್ರೊಡಕ್ಷನ್ ಕೆಲಸಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದಾರೆ. ಪಿ ಆರ್ ಕೆ ಸಂಸ್ಥೆಯಲ್ಲಿ ಸುಮಾರು ೬೦ ಜನ ಕೆಲಸ ಮಾಡುತ್ತಾರೆ. ಅವರೆಲ್ಲರ ಸಂಬಳದ ಜವಾಬ್ದಾರಿಯನ್ನು ಕೂಡ ಅಶ್ವಿನಿ ಅವರೇ ತೆಗೆದುಕೊಂಡಿದ್ದಾರೆ.
ಅಪ್ಪು ಅವರ ಹೆಣ್ಣು ಮಕ್ಕಳು ಎಂದೂ ಕೂಡ ತಾವು ದೊಡ್ಡ ಸ್ಟಾರ್ ನಟನ ಮಕ್ಕಳು ಎಂದು ಬಿಂಬಿಸಿಕೊಂಡು ಬೀಗುವುದಿಲ್ಲ. ಇನ್ನೂ ದೊಡ್ಡ ಸ್ಟಾರ್ ನಟನ ಮಕ್ಕಳು ಎಂಬುವ ಮನೋಭಾವ ಇಲ್ಲದೇ ಅಪ್ಪು ತನ್ನ ಮಕ್ಕಳನ್ನು ತುಂಬಾ ಸರಳವಾಗಿ ಹಾಗು ಶಿಸ್ತಿನಿಂದ ಬೆಳೆಸುತ್ತಿದ್ದಾರೆ.. ಅಪ್ಪು ಅವರ ಮಕ್ಕಳು ಸಾಮಾನ್ಯವಾಗಿ ಎಲ್ಲೂ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡ ಉದಾಹರಣೆಯೇ ಇಲ್ಲ. ಎಷ್ಟೇ ಶಿಸ್ತಿನಿಂದ ಮಕ್ಕಳನ್ನು ಅಪ್ಪು ಬೆಳೆಸುತ್ತಿದ್ದರು ಮನೆಯಲ್ಲಿ ತಮ್ಮ ಮಕ್ಕಳನ್ನು ಸ್ನೇಹಿತನ ರೀತಿಯಲ್ಲಿ ಖುಷಿ ಖುಷಿಯಿಂದ ಇರುತ್ತಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಮಕ್ಕಳ ಜೊತೆ ತುಂಬಾನೇ ಅನ್ಯೋನ್ಯತೆಯಿಂದ ಇದ್ದವರು. ಮಕ್ಕಳು ಎಂದರೆ ಅಪ್ಪು ಅವರಿಗೆ ಎಲ್ಲಿಲ್ಲದ ಪ್ರೀತಿ, ಸಂತೋಷ ಹಾಗೆ ಅವರ ಜೊತೆ ಮಾತನಾಡುವ ವೇಳೆ ಅವರು ಮಕ್ಕಳಾಗಿ ಅವರ ಜೊತೆ ಆಟ ಆಡುತ್ತಿದ್ದವರು. ದೊಡ್ಡವರಾಗಲಿ, ಸಣ್ಣವರಾಗಲಿ, ಚಿಕ್ಕ ಮಕ್ಕಳಾಗಲಿ ಎಲ್ಲರ ಜೊತೆ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿ ಎಂದಿಗೂ ಮರೆಯಲಾಗದು. ಪುನೀತ್ ಅವರು ಇದೀಗ ನಮ್ಮ ಜೊತೆಗೆ ಇಲ್ಲವಲ್ಲ ಎಂದು ಒಂದು ಕ್ಷಣ ನೆನೆಸಿಕೊಂಡರೆ, ಈಗಲೂ ಕಣ್ಣೀರು ಜಾರುತಿದೆ. ಹೆಚ್ಚು ಜನರ ಜೊತೆ ನಂಟು ಇಟ್ಟುಕೊಂಡಿದ್ದ ನಟ ಪುನೀತ್ ಅವರ ಅಗಲಿಕೆಯನ್ನು ಯಾರು ಕೂಡ ಅರಗಿಸಿಕೊಳ್ಳಲು ಆಗಲಾರದು.
ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ ರೀತಿಯಲ್ಲಿ ಅವರ ಹಿರಿಯ ಮಗಳು ದೃತಿ ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ. ಕಳೆದ ವರ್ಷವಷ್ಟೇ ನೇತ್ರದಾನದ ವಿಚಾರವಾಗಿ ರೋಟರಿ ಕ್ಲಬ್ ಗೆ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಮಗಳು ಧೃತಿ ಬೆಂಬಲ ನೀಡಿದ್ದಾರೆ.
ವಿದೇಶದಲ್ಲಿ ದೊಡ್ಡ ಮಗಳು ಧೃತಿ ಓದುತ್ತಿದ್ದರೂ ಕೂಡ ತನ್ನ ಸ್ವಂತ ಹಣದಿಂದ ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ವಿದೇಶದಲ್ಲಿ ಸ್ಕೋಲರ್ ಶಿಪ್ ಪಡೆಯುವುದು ತುಂಬಾ ದೊಡ್ಡ ವಿಷಯವಾಗಿದ್ದು ಅಲ್ಲಿ ಅವರು ಶಾಲಾ ಕಾಲೇಜುಗಳಲ್ಲಿ 85 ರಿಂದ 90 ಪರ್ಸೆಂಟ್ ಪಡೆದರೂ ಕೂಡ ಮತ್ತೊಂದು ಪರೀಕ್ಷೆಯನ್ನು ನಡೆಸಿ ಅದರಲ್ಲಿ 95% ಗಿಂತ ಅಧಿಕ ಇದ್ದಾರೆ ಮಾತ್ರ ಸ್ಕಲಾರ್ ಶಿಪ್ ಪಡೆದುಕೊಳ್ಳುತ್ತಾರೆ.
ಹೀಗೆ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಪರೀಕ್ಷೆ ಬರೆದರು ಅದರಲ್ಲಿ 500 ಮಾತ್ರ ಸ್ಕಾಲರ್ ಶಿಪ್ ಪಡೆದುಕೊಳ್ಳುವ ಯೋಗ ಇರುತ್ತದೆ. ಅಂತೆಯೇ ಧೃತಿ ಕೂಡ ತಾವು ಪಡೆದ ವಿದ್ಯಾಭ್ಯಾಸದ ಅಂಕಗಳ ಮೂಲಕ ತಮ್ಮ ಜ್ಞಾನದ ಮೂಲಕ ಸ್ಕಾಲರ್ ಶಿಪ್ ಪಡೆದು ಓದುತ್ತಿದ್ದು ಇದು ಹೆಮ್ಮೆಯ ವಿಷಯವೇ ಸರಿ.ಅಪ್ಪು ಅವರು ತಮ್ಮ ಮಕ್ಕಳಿಗೆ ಶಿಸ್ತು ಸಂಯಮ ಕಲಿಸಿರುವುದಲ್ಲದೆ ಅಷ್ಟೇ ಪ್ರೀತಿ ವಿಶ್ವಾಸಗಳನ್ನು ನೀಡಿ ಬೆಳೆಸಿದ್ದಾರೆ.
ತಮ್ಮ ಕುಟುಂಬ ಹಾಗೂ ಸಮಾಜ ಎರಡನ್ನೂ ಸಹ ಒಂದೇ ಭಾವನೆ ಪ್ರೀತಿಯಿಂದ ನೋಡುತ್ತಿದ್ದ ಅಪ್ಪು ಅವರು ಇಂದು ಎಲ್ಲರ ಮನ ಮನೆಗಳಲ್ಲಿ ಪ್ರೀತಿಯ ಅಪ್ಪುವಾಗಿ ರಾರಾಜಿಸಿ ಅಮರತ್ವ ಪಡೆದಿದ್ದಾರೆ. ಇಷ್ಟೆಲ್ಲ ಶ್ರೀಮಂತರಾದರೂ ತಮ್ಮ ಸ್ವ ಪ್ರತಿಭೆಯಿಂದ ವಿದ್ಯಾಭ್ಯಾಸ ಮುಂದುವರಿಸುವ ಧೃತಿ ನಿಜಕ್ಕೂ ಅಪ್ಪನ ಕೀರ್ತಿ ಉಳಿಸಿದ್ದಾರೆ.