ಬಾಲಕರ ಕೈಗೆ ದಯವಿಟ್ಟು ಮೊಬೈಲ್ ಕೊಡಬೇಡಿ : ಅಶ್ಲೀಲ ಚಿತ್ರ ನೋಡಿ ಬಾಲಕಿ ರೇಪ್​ ಮಾಡಿದ ಆರೋಪಿಗಳು ಎಲ್ಲಿ ನೋಡಿ ?

ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲರ ಕೈಯಲ್ಲಿ ರಾರಾಜಿಸುತ್ತಿದೆ . ಸಣ್ಣ ಪುಟ್ಟ ಮಗುವಿಂದ ಹಿಡಿದು ಶಾಲಾ ಬಾಲಕ ಹಾಗು ಬಾಲಕಿಯರ ಕೈಯಲ್ಲಿಇರುತ್ತದೆ . ಇದಕೆಲ್ಲ ಮುಖ್ಯ ಕಾರಣ ಏನಂದ್ರೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಸರಿಯಾದ ಗಮನ ಇಡದೆ ಇರುವುದು .ವಯಸ್ಸಿಗೆ ಬರುವ ಹುಡುಗರು ಯಾವಾಗಲು ಕೆಟ್ಟ ಅಭ್ಯಾಶಕ್ಕೆ ಬೇಗ ಗುರಿಯಾಗುತ್ತಾರೆ . ಅದರಲ್ಲೂ ಪೋರ್ನ್ ವಿಡಿಯೋಗಳನ್ನು ನೋಡುವದನ್ನು ಅಭ್ಯಾಸ ಮಾಡಿ ಕೊಂಡ ಹುಡುಗರು ಅತ್ಯಾಚಾರ ಸಹ ಮಾಡಲು ಮುಂದಾಗುತ್ತಾರೆ . ಅಂತಹ ಒಂದು ಘಟನೆ ಹೈದೆರಾಬಾದ್ ಸ್ಕೂಲ್ ನಲ್ಲಿ ನಡಿದಿದೆ .

 ಹೈದರಾಬಾದ್​ನ ಹಯಾತ್​ನಗರದಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ದಿಗ್ಭ್ರಮೆ ಉಂಟು ಮಾಡುವ ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಮೊಬೈಲ್​ನಲ್ಲಿ ಪೋರ್ನ್​ ವಿಡಿಯೋ ನೋಡಿ ಪ್ರೇರಿತರಾಗಿ ಸಹಪಾಠಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಹೈದರಾಬಾದ್‌ನ ಹೊರವಲಯದಲ್ಲಿರುವ ಹಯತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ನೇ ತರಗತಿಯ ಬಾಲಕಿಯ ಮೇಲೆ ಆಕೆಯ ಐವರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯದ ವೀಡಿಯೊ ಕ್ಲಿಪ್ ಬಳಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆರೋಪಿಗಳು ಲೈಂಗಿಕ ದೌರ್ಜನ್ಯವನ್ನು ವಿಡಿಯೋ ಮಾಡಿ ಯಾರಿಗಾದರೂ ಬಹಿರಂಗಪಡಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಹತ್ತು ದಿನಗಳ ನಂತರ ಮತ್ತೆ ಬಾಲಕಿಯನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪೊಲೀಸರು ಐವರು ವಿದ್ಯಾರ್ಥಿಗಳ ಮೇಲೆ ಆರೋಪ ಹೊರಿಸಿದ್ದಾರೆ, ಅವರೆಲ್ಲರೂ ಅಪ್ರಾಪ್ತರಾಗಿದ್ದಾರೆ. ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.