ಅಂಟಿಯ ಡ್ಯಾನ್ಸ್ ನೋಡಿ “ಕೈಕಾಲು ಹುಷಾರು ಮೇಡಂ” ಎಂದು ಕಾಲೆಳೆದ ನೆಟ್ಟಿಗರು!

ಹಿಂದೊಂದು ಕಾಲವಿತ್ತು ಆಗ ಬಯಲಾಟ ನಾಟಕಗಳನ್ನು ಹೊರತುಪಡಿಸಿ, ಇನ್ನಾವುದೇ ಸ್ಥಳಗಳಲ್ಲಿ ನಿಮಗೆ ಮಹಿಳೆಯರ ನೃತ್ಯ ಇತ್ಯಾದಿ ಇತ್ಯಾದಿ ಕಾಣಸಿಗುತ್ತಿರಲಿಲ್ಲ. ಆದರೆ ಕಾಲಕಳೆದಂತೆ ದೂರದರ್ಶನಗಳು ಬಂದವು, ನಾಟಕ ಬಯಲಾಟಗಳ ಜಾಗದಲ್ಲಿ ಸಿನಿಮಾ ಬಂದವು. ಹೀಗೇನೆ ಕಾಲ ಇನ್ನಷ್ಟು ಮುಂದುವರೆದಾಗ, ಸ್ಮಾರ್ಟ್ ಫೋನ್ ಗಳು ಹಾಗೂ ಅವುಗಳಲ್ಲಿ ಟಿಕ್ ಟಾಕ್ – ರೊಪೋಸೋದಂತಹ ಶಾರ್ಟ್ ವಿಡಿಯೋ ಮಾಡಿ ಪೋಸ್ಟ್ ಮಾಡುವ ಅವಕಾಶ ಬಂದವು.

ಇವುಗಳಲ್ಲಿ ಕೇವಲ ನಟ ನಟಿಯರಲ್ಲ ಬದಲಾಗಿ ಯಾರು ಬೇಕಾದರೂ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಇಂತಹ ಆಪ್ ಗಳನ್ನು ಹಾಕಿಕೊಂಡು ವಿಡಿಯೋ ಮಾಡಿ ಹರಿಬಿಡಬಹುದಾಗಿದೆ. ಆ ರೀತಿ ಹರಿಬಿಟ್ಟ ವಿಡಿಯೋಗಳಲ್ಲಿ ನೂರಾರು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಮನಸ್ಸು ಗೆದ್ದು ಸಾಕಷ್ಟು ವೈರಲ್ ಆಗುತ್ತವೆ.

 

ಅಂತಹ ವಿಡಿಯೋಗಳಲ್ಲಿ ಹರಿಯಾಣದ ಸಪ್ನ ಚೌಧರಿಯಂತಹ ಯುವತಿಯರು ಹೆಜ್ಜೆ ಹಾಕಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ಇಂತಹುದೆ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಓರ್ವ ಆಂಟಿ ಒಂದು ಹರಿಯಾಣಿ ಹಾಡಿಗೆ ಹೆಜ್ಜೆ ಹಾಕಿದ್ದು ನೆಟ್ಟಿಗರನ್ನು ಸಾಕಷ್ಟು ಆಕರ್ಷಿಸಿದೆ.

ಸೀರೆಯುಟ್ಟು ಬಳುಕುತ್ತ ಆಕೆ ಮಾಡುವ ಮುಖ ಭಾವ – ಶೈಲಿ ಕಂಡು ಪದೇ ಪದೇ ಈ ವಿಡಿಯೋವನ್ನು ವೀಕ್ಷಿಸುತ್ತಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಇನ್ಸ್ಟಾಗ್ರಾಮ್ ನ Sumnyadav ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಇದುವರೆಗೂ ಲಕ್ಷಾಂತರ ಜನರು ವೀಕ್ಷಿಸಿದ್ದು, 4,000 ಕ್ಕಿಂತಲೂ ಅಧಿಕ ಜನರು ಈ ಈ ವಿಡಿಯೋವನ್ನು ಇಷ್ಟ ಪಟ್ಟಿದ್ದಾರೆ. ಹಾಗೇನೇ ಸಾವಿರಾರು ಜನರು ಕಾಮೆಂಟ್ ಕೂಡ ಮಾಡಿದ್ದಾರೆ. ಸಾಕಷ್ಟು ಜನ ಅವರ ಎಕ್ಸಪ್ರೆಶನ್ ಹಾಗೂ ಸೌಂದರ್ಯವನ್ನು ಇಷ್ಟಪಟ್ಟಿದ್ದಾರೆ, ಆ ಕುರಿತಂತೆ ಕಾಮೆಂಟ್ ಕೂಡ ಮಾಡಿದ್ದಾರೆ. ಆದರೆ ಕೆಲವರು ಅವರ ನೃತ್ಯವನ್ನು ಟೀಕಿಸಿದ್ದಾರೆ. ಕುಳಿತಲ್ಲೇ ಕೈ, ಕಾಲು, ಕಣ್ಣು, ಮೂಗು, ಬಾಯಿ ಅಲ್ಲಾಡಿಸಿ ಅವರು ಮಾಡುತ್ತಿರುವ ಡ್ಯಾನ್ಸ್ ಅವರಿಗೆ ಹಿಡಿಸಿಲ್ಲ. ಹೀಗಾಗಿ “ಕೈಕಾಲು ಹುಷಾರು ಮೇಡಂ” ಎಂದು ಅವರ ಕಾಲೆಳೆದಿದ್ದಾರೆ.