ಕುದುರೆ ವಿಶೇಷವಾಗಿ ಲಕ್ಷ್ಮಿ ಪ್ರಧಾನವಾದ ಪ್ರಾಣಿ. ಕುದುರೆ ಅನ್ನು ಲಕ್ಷ್ಮಿ ಸಮಾನವಾಗಿ ನೋಡುತ್ತೇವೇ ಹಾಗು ವಿದ್ಯೆ ಪ್ರಧಾಯಕವಾಗಿ ಕೂಡ ಐಗ್ರೀವಾ ಸ್ವರೂಪವಾಗಿ ನೋಡುತ್ತೇವೆ. ಸಕಲ ಸಂಪತ್ತು ವೃದ್ಧಿಗಾಗಿ ಐಗ್ರೀವಾನನ್ನು ಸ್ಮರಣೆ ಮಾಡಲಾಗುತ್ತಿತ್ತು. ಹಾಗಾಗಿ ವಿದ್ಯಾಪ್ರದಾಯಕ ಆಗಿರುವ ಅಖಂಡ ಐಶ್ವರ್ಯ ಪ್ರಧಾನ ಆಗಿರುವ ಐಗ್ರೀವಾನ ಅನುಗ್ರಹ ಆಗಬೇಕು ಎಂದರೆ ಐಗ್ರೀವಾ ದೇವರನ್ನು ಸ್ಮರಣೆ ಮಾಡಬೇಕು.
ಇನ್ನು ಕುದುರೆ ಫೋಟೋವನ್ನು ಮನೆಯ ಹಾಲ್ ನಲ್ಲಿ ಹಾಕುವುದರಿಂದ ಅಖಂಡ ಸಿರಿ ಸಂಪತ್ತುಗಳು ಪ್ರಾಪ್ತ ಆಗುತ್ತದೆ. ಕುದುರೆ ಫೋಟೋ ಅಥವಾ ಪೇಂಟಿಂಗ್ ಹಾಕುವುದಾದರೆ ಓಡುವ ಕುದುರೆ ಫೋಟೋವನ್ನು ಹಾಕಬೇಕು. ಅದರೆ ನಿಮ್ಮ ಮನೆಯ ಹೊರಗೆ ಹೋಗುವ ರೀತಿ ಕುದುರೆ ಫೋಟೋವನ್ನು ಹಾಕಬಾರದು.
ಇನ್ನು ದಕ್ಷಿಣ ದಿಕ್ಕಿಗೆ ಕುದುರೆ ಫೋಟೋವನ್ನು ಅಥವಾ ಐಗ್ರೀವಾ ಫೋಟೋವನ್ನು ಹಾಕುವುದರಿಂದ ಸ್ತ್ರೀಯರಿಗೆ ಹೆಚ್ಚು ಅನುಕೂಲವಿದೇ. ವಿಶೇಷವಾಗಿ ಕೀರ್ತಿ ಹಾಗು ಧನ ಲಾಭಗಳು ಪ್ರಾಪ್ತ ಆಗುತ್ತದೆ.ಇನ್ನು ನೈರುತ್ಯ ದಿಕ್ಕಿನಲ್ಲಿ ಕುದುರೆ ಓಡುವ ಫೋಟೋ ಹಾಗು ಐಗ್ರೀವಾನ ಫೋಟೋ ಹಾಕುವುದರಿಂದ ನಿಮ್ಮ ಮನೆಯಲ್ಲಿ ಉದ್ಯೋಗ ಮಾಡುವವರಿಗೆ ಒಳ್ಳೆಯದು. ಇವರಿಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ.
ಇನ್ನು ಈಶನ್ಯ ದಿಕ್ಕು ಬಹಳ ಶ್ರೇಷ್ಠವಾದ ದಿಕ್ಕು. ಈ ದಿಕ್ಕಿನಲ್ಲಿ ಐಗ್ರೀವಾ ಸ್ವರೂಪ ಆಗಿರುವ ಕುದುರೆ ಫೋಟೋ ಹಾಕಿದರೆ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಇರುತ್ತದೆ.ಇನ್ನು ವಾಯುವ್ಯಾ ದಿಕ್ಕಿನಲ್ಲಿ ಏನಾದರು ಕುದುರೆ ಫೋಟೋ ಹಾಕಿದರೆ ಆರ್ಥಿಕ ಬಾದೆ ನಿವಾರಣೆ ಆಗಿ ವ್ಯಾಪರ ವೃದ್ಧಿ ಆಗುತ್ತದೆ.ಈ ಮೂಲಕ ಪ್ರತಿಯೊಂದು ದಿಕ್ಕಿನಲ್ಲಿ ವಿಶೇಷ ಪ್ರಯೋಜನವನ್ನು ಕಾಣಬಹುದು.